Posts

ದಿನಾಂಕ 30. 11. 2020 ರಂದು ಸರ್ಕಾರಿ ಹುದ್ದೆಯಿಂದ ನಿವೃತ್ತರಾದ ಜಿ.ಎಂ ಮಹೇಶ್ವರಯ್ಯ ಮುಖ್ಯಗುರುಗಳು ಸರಕಾರಿ ಪ್ರೌಢಶಾಲೆ ತಾಳೂರು ಸಿರುಗುಪ್ಪ ತಾಲ್ಲೂಕು ಬಳ್ಳಾರಿ ಜಿಲ್ಲಾ ಇವರ ನಿವೃತ್ತಿ ಕಾರ್ಯಕ್ರಮ ನಡೆದ ದಿನಾಂಕ:೦೭/೧೨/೨೦೨೦ ರ ಅಂಕಣ

Image
ಜಿಎಂ ಮಹೇಶ್ವರಯ್ಯ ಸರ್ ಇವರು ಸಿಡಿಗಿನಮೊಳ ಮೂಲದವರು ಶ್ರೀಯುತರು  ಸಂಡೂರಿನ ಬೊಮ್ಮಘಟ್ಟ ಬಳ್ಳಾರಿಯ ಬಾಣಾಪುರ, ಹಗರಿ ಸ್ಟೇಷನ್ ನಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿ, ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಆರಂಭಿಸಿ ಸುಮಾರು 9 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಹಾರ್ಮೋನಿಯಂ ವಾದಕರು ಹಾಡುಗಾರರು ಪುರಾಣ ಪ್ರವಾಚಕರು ಆಗಿದ್ದು ಪ್ರತಿಯೊಬ್ಬರನ್ನು ಸದಾಕಾಲ ಮುಕ್ತಮನಸ್ಸಿನಿಂದ ಮಾತನಾಡಿಸುತ್ತಾ ಜನರ,ವಿದ್ಯಾರ್ಥಿಗಳ, ಶಿಕ್ಷಕ ಬಳಗದ ಹೃದಯವನ್ನು ಗೆದ್ದಿರುವ ಶ್ರೀಮಂತರು . ಸಹೃದಯರು ನಿರಂತರವಾಗಿ 34 ವರ್ಷಗಳ ಸೇವೆಯನ್ನು ವಿದ್ಯಾರ್ಥಿಗಳ ಪ್ರಗತಿಗಾಗಿ, ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿದ್ದರು. ಶ್ರೀಯುತರಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ, ವಿಜ್ಞಾನಿಗಳು, ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳು, ಶಿಕ್ಷಕರುಗಳು, ಕ್ಲರ್ಕ್ ಗಳು ಆಗಿದ್ದು ಶ್ರೀಯುತರ ಮೇಲೆ ನಿಷ್ಠೆ ಉಳ್ಳವರಾಗಿದ್ದಾರೆ ಇದು ಅವರ ಶಿಕ್ಷಕ ಸೇವಾ ವೃತ್ತಿಯ ಮಹೋನ್ನತ ನಿಷ್ಠೆಯ ಫಲಿತಾಂಶವಾಗಿದೆ. 34 ವರ್ಷಗಳ ನಿರಂತರ ಸೇವೆಯಲ್ಲಿ ತಮ್ಮನ್ನು ತಾವೇ ಮರೆತ ಶ್ರೀಯುತರಿಗೆ ದೇವರು ಅಪಾರವಾದಂತಹ ಐಶ್ವರ್ಯ ಆರೋಗ್ಯವನ್ನು ಕರುಣಿಸಿರುವುದು.ನಮ್ಮೆಲ್ಲರ ಪುಣ್ಯ ಏಕೆಂದರೆ  ಶ್ರೀಯುತರ  ನಿಸ್ವಾರ್ಥ ಸೇವೆ ಪ್ರತಿಯೊಬ್ಬರಿಗೂ ಒಳಿತನ್...

GOPAL.B WORK FROM HOME 1.2.3.4.ACTIVITIS

ಕೋವಿಡ್ -೧೯ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ದೇಶಿಸಿದಂತೆ ಚಟುವಟಿಕೆಗಳನ್ನು ಮಾಡಲಾಗಿದೆ ಅವುಗಳ ವಿವರ ಪಿಡಿಎಫ್ ರೂಪದಲ್ಲಿ ಸಂಗ್ರಹಿಸಲಾಗಿದೆ. https ://drive.google.com/file/d/1_VeJlmEok_Y6Vw6koz6EuPu_8Hzms6Av/view?usp=drivesdk

ದಿನಾಂಕ 04.12.2020 ಸೇಂಟ್ ಜಾನ್ಸ್ ಹೈಸ್ಕೂಲ್ ಬಳ್ಳಾರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ

Image
ದಿನಾಂಕ 04.12.2020 ರಂದು ಬಳ್ಳಾರಿ ಪಕ್ಷಿಮ ವಲಯದ ಶೈಕ್ಷಣಿಕ ಪ್ರಗತಿ ಪರಿಶೀಲನಾಾ ಸಭೆಯನ್ನು ಸೇಂಟ್ ಜಾನ್ ಹೈಸ್ಕೂಲ್ ಕೋಟೆ ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಮಾನ್ಯ ಉಪ ನಿರ್ದೇಶಕರು (ಆಡಳಿತ )ಹಾಗೂ ಮಾನ್ಯ ಉಪನಿರ್ದೇಶಕರು (ಅಭಿವೃದ್ಧಿ) ಕುರುಗೋಡಿನ ಕ್ಷೇತ್ರಶಿಕ್ಷಣಾಧಿಕಾರಿಗಳು ಜಿಲ್ಲಾ ಶಿಕ್ಷಣಾಧಿಕಾರಿಗಳು  ಎಲ್ಲಾ ವಿಷಯ ಪರಿವೀಕ್ಷಕರು ಬಿ ಆರ್ ಸಿ ಅಧಿಕಾರಿಗಳುು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕುರಿತು ಪರಿಶೀಲನೆ ನಡೆಸಲಾಯಿತು 2020 21ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರಗತಿಗಾಗಿ ಹಮ್ಮಿಕೊಂಡು ವಿವಿಧ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು  ೧.ಶಿಕ್ಷಕರಿಗೆ ನೀಡಿದ ೧೦ ಅಸೈನ್ಮೆಂಟ್ ಕುರಿತು ಸಮಾಲೋಚಿಸಲಾಯಿತು. ೨. ಬ್ಲಾಗ್ ರಚನೆ ಮತ್ತು ಪೋಸ್ಟ್ ಗಳ ಬಗ್ಗೆ ಚರ್ಚಿಸಲಾಯಿತು ೩. ಶಿಕ್ಷಕರಿಗೆ ನೀಡಿದ ವೇಬಿನರ್ ತರಬೇತಿಯ ದಾಖಲೀಕರಣ ವನ್ನು ಪರಿಶೀಲಿಸಲಾಯಿತು. ೪. ವಿದ್ಯಾಗಮ ಹಾಗೂ ವಠಾರ ಶಾಲೆಯ ಕುರಿತು ಸಮಾಲೋಚಿಸಲಾಯಿತು. ೫. ಕೋವಿಡ್ ವಿಷಮಸ್ಥಿತಿಯಲ್ಲಿ ಶಿಕ್ಷಣಿಕ ಪ್ರಗತಿಯ ಸಲುವಾಗಿ ವಿದ್ಯಾರ್ಥಿಗಳ ಮನೆ ಬೇಟೆಯನ್ನು ಕುರಿತು ಕೇಳಲಾಯಿತು. ೬. ಕರ್ನಾಟಕ ಸರ್ಕಾರ ಪ್ರಸ್ತುತ ಪಡಿಸಿದ ಚಂದನ ಟಿವಿಯಲ್ಲಿ ಪ್ರಸಾರವಾಗುವ ಇ ಸಂವೇದ ಕಾರ್ಯಕ್ರಮವನ್ನು ಕುರಿತು ಸಮಾಲೋಚಿಸಿ ದಾಖಲೆಗಳನ್ನು ನಿರ್ವಹಿಸಲು ಸೂಚಿಸಿದರು. ೭. E.O ಅಧಿಕಾರಿಗಳು ELC ...