ಜಿಎಂ ಮಹೇಶ್ವರಯ್ಯ ಸರ್ ಇವರು ಸಿಡಿಗಿನಮೊಳ ಮೂಲದವರು ಶ್ರೀಯುತರು ಸಂಡೂರಿನ ಬೊಮ್ಮಘಟ್ಟ ಬಳ್ಳಾರಿಯ ಬಾಣಾಪುರ, ಹಗರಿ ಸ್ಟೇಷನ್ ನಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿ, ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಆರಂಭಿಸಿ ಸುಮಾರು 9 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಹಾರ್ಮೋನಿಯಂ ವಾದಕರು ಹಾಡುಗಾರರು ಪುರಾಣ ಪ್ರವಾಚಕರು ಆಗಿದ್ದು ಪ್ರತಿಯೊಬ್ಬರನ್ನು ಸದಾಕಾಲ ಮುಕ್ತಮನಸ್ಸಿನಿಂದ ಮಾತನಾಡಿಸುತ್ತಾ ಜನರ,ವಿದ್ಯಾರ್ಥಿಗಳ, ಶಿಕ್ಷಕ ಬಳಗದ ಹೃದಯವನ್ನು ಗೆದ್ದಿರುವ ಶ್ರೀಮಂತರು . ಸಹೃದಯರು ನಿರಂತರವಾಗಿ 34 ವರ್ಷಗಳ ಸೇವೆಯನ್ನು ವಿದ್ಯಾರ್ಥಿಗಳ ಪ್ರಗತಿಗಾಗಿ, ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿದ್ದರು. ಶ್ರೀಯುತರಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ, ವಿಜ್ಞಾನಿಗಳು, ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳು, ಶಿಕ್ಷಕರುಗಳು, ಕ್ಲರ್ಕ್ ಗಳು ಆಗಿದ್ದು ಶ್ರೀಯುತರ ಮೇಲೆ ನಿಷ್ಠೆ ಉಳ್ಳವರಾಗಿದ್ದಾರೆ ಇದು ಅವರ ಶಿಕ್ಷಕ ಸೇವಾ ವೃತ್ತಿಯ ಮಹೋನ್ನತ ನಿಷ್ಠೆಯ ಫಲಿತಾಂಶವಾಗಿದೆ. 34 ವರ್ಷಗಳ ನಿರಂತರ ಸೇವೆಯಲ್ಲಿ ತಮ್ಮನ್ನು ತಾವೇ ಮರೆತ ಶ್ರೀಯುತರಿಗೆ ದೇವರು ಅಪಾರವಾದಂತಹ ಐಶ್ವರ್ಯ ಆರೋಗ್ಯವನ್ನು ಕರುಣಿಸಿರುವುದು.ನಮ್ಮೆಲ್ಲರ ಪುಣ್ಯ ಏಕೆಂದರೆ ಶ್ರೀಯುತರ ನಿಸ್ವಾರ್ಥ ಸೇವೆ ಪ್ರತಿಯೊಬ್ಬರಿಗೂ ಒಳಿತನ್...
Comments
Post a Comment