ದಿನಾಂಕ 04.12.2020 ಸೇಂಟ್ ಜಾನ್ಸ್ ಹೈಸ್ಕೂಲ್ ಬಳ್ಳಾರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ
ದಿನಾಂಕ 04.12.2020 ರಂದು ಬಳ್ಳಾರಿ ಪಕ್ಷಿಮ ವಲಯದ ಶೈಕ್ಷಣಿಕ ಪ್ರಗತಿ ಪರಿಶೀಲನಾಾ ಸಭೆಯನ್ನು ಸೇಂಟ್ ಜಾನ್ ಹೈಸ್ಕೂಲ್ ಕೋಟೆ ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಮಾನ್ಯ ಉಪ ನಿರ್ದೇಶಕರು (ಆಡಳಿತ )ಹಾಗೂ ಮಾನ್ಯ ಉಪನಿರ್ದೇಶಕರು (ಅಭಿವೃದ್ಧಿ) ಕುರುಗೋಡಿನ ಕ್ಷೇತ್ರಶಿಕ್ಷಣಾಧಿಕಾರಿಗಳು ಜಿಲ್ಲಾ ಶಿಕ್ಷಣಾಧಿಕಾರಿಗಳು ಎಲ್ಲಾ ವಿಷಯ ಪರಿವೀಕ್ಷಕರು ಬಿ ಆರ್ ಸಿ ಅಧಿಕಾರಿಗಳುು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕುರಿತು ಪರಿಶೀಲನೆ ನಡೆಸಲಾಯಿತು 2020 21ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರಗತಿಗಾಗಿ ಹಮ್ಮಿಕೊಂಡು ವಿವಿಧ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು
೧.ಶಿಕ್ಷಕರಿಗೆ ನೀಡಿದ ೧೦ ಅಸೈನ್ಮೆಂಟ್ ಕುರಿತು ಸಮಾಲೋಚಿಸಲಾಯಿತು.
೨. ಬ್ಲಾಗ್ ರಚನೆ ಮತ್ತು ಪೋಸ್ಟ್ ಗಳ ಬಗ್ಗೆ ಚರ್ಚಿಸಲಾಯಿತು
೩. ಶಿಕ್ಷಕರಿಗೆ ನೀಡಿದ ವೇಬಿನರ್ ತರಬೇತಿಯ ದಾಖಲೀಕರಣ ವನ್ನು ಪರಿಶೀಲಿಸಲಾಯಿತು.
೪. ವಿದ್ಯಾಗಮ ಹಾಗೂ ವಠಾರ ಶಾಲೆಯ ಕುರಿತು ಸಮಾಲೋಚಿಸಲಾಯಿತು.
೫. ಕೋವಿಡ್ ವಿಷಮಸ್ಥಿತಿಯಲ್ಲಿ ಶಿಕ್ಷಣಿಕ ಪ್ರಗತಿಯ ಸಲುವಾಗಿ ವಿದ್ಯಾರ್ಥಿಗಳ ಮನೆ ಬೇಟೆಯನ್ನು ಕುರಿತು ಕೇಳಲಾಯಿತು.
೬. ಕರ್ನಾಟಕ ಸರ್ಕಾರ ಪ್ರಸ್ತುತ ಪಡಿಸಿದ ಚಂದನ ಟಿವಿಯಲ್ಲಿ ಪ್ರಸಾರವಾಗುವ ಇ ಸಂವೇದ ಕಾರ್ಯಕ್ರಮವನ್ನು ಕುರಿತು ಸಮಾಲೋಚಿಸಿ ದಾಖಲೆಗಳನ್ನು ನಿರ್ವಹಿಸಲು ಸೂಚಿಸಿದರು.
೭. E.O ಅಧಿಕಾರಿಗಳು ELC ಕುರಿತಾದ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಹಮ್ಮಿಕೊಳ್ಳಲು ನೋಡಲ್/ ಉಪ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು
೮. ಸೇತುಬಂಧ ಕೋರ್ಸ್ ಬಗ್ಗೆ ವಿಶೇಷವಾಗಿ ತಿಳಿಸಿಕೊಡಲಾಯಿತು.
೯. ಬಿ ಆರ್ ಸಿ ಸುಧಾಕರ್ ಸರ್ ಅವರು ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಲು ತಿಳಿಸಲಾಯಿತು
೧೦. ಶೇಕಡ ೪೦ ಕಡಿಮೆ ಫಲಿತಾಂಶ ಬಂದ ಶಾಲೆಗಳ ಕುರಿತಾಗಿ ಚರ್ಚಿಸಲಾಯಿತು.
೧೧.೧೨-12 ಅಂಶಗಳ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.
೧೨. ಕಾಸ್ ಕೋರ್ಸ್ ವಿವರಗಳು
೧೩. ತೆರೆದ ಪುಸ್ತಕ ಪರೀಕ್ಷೆ ಗಳ ವಿವರ
ಈ ಮೇಲಿನ ವಿಷಯಗಳನ್ನು ಕುರಿತಾಗಿ ಸಮಾಲೋಚನೆ ಮಾಡಿ ನಿಮ್ಮ ಶಾಲೆಗಳಿಗೆ ಭೇಟಿ ನೀಡಿ ಎಲ್ಲಾ ಶಿಕ್ಷಕರುಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದಾಗಿ ತಿಳಿಸಿ ಈದಿನ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಧನ್ಯವಾದಗಳು
Comments
Post a Comment