ದಿನಾಂಕ 30. 11. 2020 ರಂದು ಸರ್ಕಾರಿ ಹುದ್ದೆಯಿಂದ ನಿವೃತ್ತರಾದ ಜಿ.ಎಂ ಮಹೇಶ್ವರಯ್ಯ ಮುಖ್ಯಗುರುಗಳು ಸರಕಾರಿ ಪ್ರೌಢಶಾಲೆ ತಾಳೂರು ಸಿರುಗುಪ್ಪ ತಾಲ್ಲೂಕು ಬಳ್ಳಾರಿ ಜಿಲ್ಲಾ ಇವರ ನಿವೃತ್ತಿ ಕಾರ್ಯಕ್ರಮ ನಡೆದ ದಿನಾಂಕ:೦೭/೧೨/೨೦೨೦ ರ ಅಂಕಣ

ಜಿಎಂ ಮಹೇಶ್ವರಯ್ಯ ಸರ್ ಇವರು ಸಿಡಿಗಿನಮೊಳ ಮೂಲದವರು ಶ್ರೀಯುತರು  ಸಂಡೂರಿನ ಬೊಮ್ಮಘಟ್ಟ ಬಳ್ಳಾರಿಯ ಬಾಣಾಪುರ, ಹಗರಿ ಸ್ಟೇಷನ್ ನಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿ, ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಆರಂಭಿಸಿ ಸುಮಾರು 9 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಹಾರ್ಮೋನಿಯಂ ವಾದಕರು ಹಾಡುಗಾರರು ಪುರಾಣ ಪ್ರವಾಚಕರು ಆಗಿದ್ದು ಪ್ರತಿಯೊಬ್ಬರನ್ನು ಸದಾಕಾಲ ಮುಕ್ತಮನಸ್ಸಿನಿಂದ ಮಾತನಾಡಿಸುತ್ತಾ ಜನರ,ವಿದ್ಯಾರ್ಥಿಗಳ, ಶಿಕ್ಷಕ ಬಳಗದ ಹೃದಯವನ್ನು ಗೆದ್ದಿರುವ ಶ್ರೀಮಂತರು . ಸಹೃದಯರು ನಿರಂತರವಾಗಿ 34 ವರ್ಷಗಳ ಸೇವೆಯನ್ನು ವಿದ್ಯಾರ್ಥಿಗಳ ಪ್ರಗತಿಗಾಗಿ, ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿದ್ದರು. ಶ್ರೀಯುತರಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ, ವಿಜ್ಞಾನಿಗಳು, ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳು, ಶಿಕ್ಷಕರುಗಳು, ಕ್ಲರ್ಕ್ ಗಳು ಆಗಿದ್ದು ಶ್ರೀಯುತರ ಮೇಲೆ ನಿಷ್ಠೆ ಉಳ್ಳವರಾಗಿದ್ದಾರೆ ಇದು ಅವರ ಶಿಕ್ಷಕ ಸೇವಾ ವೃತ್ತಿಯ ಮಹೋನ್ನತ ನಿಷ್ಠೆಯ ಫಲಿತಾಂಶವಾಗಿದೆ. 34 ವರ್ಷಗಳ ನಿರಂತರ ಸೇವೆಯಲ್ಲಿ ತಮ್ಮನ್ನು ತಾವೇ ಮರೆತ ಶ್ರೀಯುತರಿಗೆ ದೇವರು ಅಪಾರವಾದಂತಹ ಐಶ್ವರ್ಯ ಆರೋಗ್ಯವನ್ನು ಕರುಣಿಸಿರುವುದು.ನಮ್ಮೆಲ್ಲರ ಪುಣ್ಯ ಏಕೆಂದರೆ  ಶ್ರೀಯುತರ  ನಿಸ್ವಾರ್ಥ ಸೇವೆ ಪ್ರತಿಯೊಬ್ಬರಿಗೂ ಒಳಿತನ್ನು ಬಯಸುವ ಅವರ ವಿಶೇಷಗುಣ. 
ಸಹೃದಯ ಸನ್ಮಾನ್ಯ ಗುರುಗಳಿಗೆ ದಿನಾಂಕ  
೦7 .12. 2020 ರಂದು ಊರಿನ ಗಣ್ಯ ಮಾನ್ಯರು ಕಾರ್ಯಕ್ರಮವನ್ನು ಹಮ್ಮಿಕೊಂಡು ಅದ್ದೊರಿಯಾದ                        ಬೀಳ್ಕೊಡುಗೆ ನೀಡಿದರು.
       ಶ್ರೀಯುತರ ಬೀಳ್ಕೊಡುಗೆ ಸಮಾರಂಭದಲ್ಲಿ                ಭಾಗಿಯಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು
               ನಿವೃತ್ತ ಮುಖ್ಯೋಪಾಧ್ಯಾಯರಾದ                              ಜಿಎಂ.ಮಹೇಶ್ವರಯ್ಯ  sir 
              ಜೊತೆಗೆ  ಶಿಕ್ಷಕ.  - ಸಿಬ್ಬಂದಿ ಸಮೂಹ
        ಊರಿನ ಗಣ್ಯರೊಂದಿಗೆ ಸನ್ಮಾನಿತರಾಗಿರುವ 
           ಜಿಎಂ ಮಹೇಶ್ವರಯ್ಯ ಮುಖ್ಯಗುರುಗಳು
      ಶ್ರೀಯುತರನ್ನು ಅಭಿನಂದಿಸುತ್ತರುವ ಕ್ಷಣಗಳು
           
            ಶ್ರೀಯುತರ ಸರ್ಕಾರ ನೌಕರಿಗೆ ನಿವೃತ್ತಿ
            ಬಾಲ್ಯದಿಂದ ಬಂದ ಅವರ ಪ್ರವೃತ್ತಿಗಲ್ಲ
            ವೃತ್ತಿಗೆ ಮುಕ್ತಾಯ ಉಂಟು
            ಪ್ರವೃತ್ತಿಗೆ ಮುಕ್ತಾಯ ಉಂಟೆ?
    ವೃತ್ತಿಯಿಂದ ಶಿಕ್ಷಕ -ವಿದ್ಯಾರ್ಥಿಯನ್ನು ಗೆದ್ದಿದ್ದುಂಟು
    ಪ್ರವೃತ್ತಿಯಿಂದ ಜನಮಾನಸವನ್ನು ಗೆದ್ದದ್ದುಂಟು
    ವೃತ್ತಿಗೆ ನಿವೃತ್ತಿ ಆದರೂ ಪ್ರವೃತ್ತಿವುಂಟ                        ಅವರು ಯಾವಾಗಲೂ ಚಿರಾಯು.......                      ಚಿರಾಯು................ ಚಿರಾಯು........

Comments

Post a Comment